ಕನ್ನಡ
ಕನ್ನಡ
Appearance
ಒಬ್ಬ ನಿಜವಾದ ವಿಶ್ವಾಸಿಗೆ ಪವಿತ್ರಾತ್ಮನ ಮೂಲಕ ಸಿಗುವ ದೈವಿಕ ಪ್ರಕಟಣೆಯ (ರೆವೆಲೇಶನ್) ಪ್ರಾಮುಖ್ಯತೆಯನ್ನು ಎಷ್ಟು ಒತ್ತಿ ಹೇಳಿದರೂ ಸಾಲದು. ದೈವಿಕ ಪ್ರಕಟಣೆಯು ನೀವು ಅಂದುಕೊಂಡಿರುವುದಕ್ಕಿಂತಲೂ ಹೆಚ್ಚಿನ ಅರ್ಥವನ್ನು ನಿಮಗೆ ನೀಡುತ್ತದೆ. ಈಗ ನಾನು ಬೈಬಲಿನ ಪ್ರಕಟಣೆ ಗ್ರಂಥ ಮತ್ತು ನಿಮ್ಮ ಬಗ್ಗೆ ಮಾತನಾಡುತ್ತಿಲ್ಲ. ನಾನು ಎಲ್ಲಾ ದೈವಿಕ ಪ್ರಕಟಣೆಗಳ ಬಗ್ಗೆ ಮಾತನಾಡುತ್ತಿದ್ದೇನೆ. ಇದು ಸಭೆಗೆ (ಚರ್ಚ್) ಅತ್ಯಂತ ಪ್ರಮುಖವಾಗಿದೆ. ಮತ್ತಾಯ 16 ರಲ್ಲಿ ಯೇಸು ತನ್ನ ಶಿಷ್ಯರಿಗೆ ಈ ಪ್ರಶ್ನೆಯನ್ನು ಕೇಳಿದ್ದು ನಿಮಗೆ ನೆನಪಿದೆಯೇ,
"
ಮನುಷ್ಯಕುಮಾರನಾದ ನನ್ನನ್ನು ಜನರು ಯಾರೆಂದು ಹೇಳುತ್ತಾರೆ?
ಅದಕ್ಕವರು—ಕೆಲವರು ಬಾಪ್ತಿಸ್ಮ ಕೊಡುವ ಯೋಹಾನನೆಂತಲೂ ಕೆಲವರು ಎಲೀಯನೆಂತಲೂ ಇನ್ನು ಕೆಲವರು ಯೆರೆಮೀಯನ ಇಲ್ಲವೆ ಪ್ರವಾದಿಗಳಲ್ಲಿ ಒಬ್ಬನೆಂತಲೂ ಹೇಳುತ್ತಾರೆ ಅಂದರು.
ಆತನು ಅವರಿಗೆ—ಆದರೆ ನೀವು ನನ್ನನ್ನು ಯಾರೆಂದು ಹೇಳುತ್ತೀರಿ ಎಂದು ಕೇಳಲು,
ಸೀಮೋನ ಪೇತ್ರನು ಪ್ರತ್ಯುತ್ತರವಾಗಿ—ನೀನು ಜೀವವುಳ್ಳ ದೇವರ ಕುಮಾರನಾದ ಕ್ರಿಸ್ತನು ಅಂದನು.
ಯೇಸು ಅವನಿಗೆ—ಯೋನನ ಮಗನಾದ ಸೀಮೋನನೇ, ನೀನು ಧನ್ಯನು; ರಕ್ತಮಾಂಸಗಳು ಇದನ್ನು ನಿನಗೆ ಪ್ರಕಟಿಸಲಿಲ್ಲ, ಪರಲೋಕದಲ್ಲಿರುವ ನನ್ನ ತಂದೆಯೇ ಪ್ರಕಟಿಸಿದನು.
ನಾನೂ ನಿನಗೆ ಹೇಳುತ್ತೇನೆ—ನೀನು ಪೇತ್ರನು (ಬಂಡೆ), ಈ ಬಂಡೆಯ ಮೇಲೆ ನಾನು ನನ್ನ ಸಭೆಯನ್ನು ಕಟ್ಟುವೆನು; ಮರಣಲೋಕದ ದ್ವಾರಗಳು ಅದರ ಎದುರು ನಿಲ್ಲಲಾರವು.
"
ರೋಮನ್ ಕ್ಯಾಥೋಲಿಕರು ಸಭೆಯು ಪೇತ್ರನ ಮೇಲೆ ಕಟ್ಟಲ್ಪಟ್ಟಿದೆ ಎಂದು ಹೇಳುತ್ತಾರೆ. ಅದು ನಿಜಕ್ಕೂ ಶಾರೀರಿಕ (ಲೌಕಿಕ) ಆಲೋಚನೆ. ಕರ್ತನಾದ ಯೇಸುವನ್ನು ನಿರಾಕರಿಸಿ, ಹಾಗೆ ಮಾಡುವಾಗ ಶಪಿಸಿದ ಅಂತಹ ಅಸ್ಥಿರ ಮನುಷ್ಯನ ಮೇಲೆ ದೇವರು ತನ್ನ ಸಭೆಯನ್ನು ಹೇಗೆ ತಾನೆ ಕಟ್ಟಲು ಸಾಧ್ಯ? ಪಾಪದಲ್ಲಿ ಹುಟ್ಟಿದ ಯಾವುದೇ ಮನುಷ್ಯನ ಮೇಲೆ ದೇವರು ತನ್ನ ಸಭೆಯನ್ನು ಕಟ್ಟಲು ಸಾಧ್ಯವಿಲ್ಲ. ಮತ್ತು ಅದು ಅಲ್ಲಿ ಬಿದ್ದಿದ್ದ ಯಾವುದೋ ಒಂದು ಕಲ್ಲು ಅಲ್ಲ, ದೇವರು ಆ ಸ್ಥಳದ ನೆಲವನ್ನು ಪವಿತ್ರಗೊಳಿಸಿದಂತೆ. ಮತ್ತು ಪ್ರೊಟೆಸ್ಟಂಟರು ಹೇಳುವಂತೆ ಸಭೆಯು ಯೇಸುವಿನ ಮೇಲೆ ಕಟ್ಟಲ್ಪಟ್ಟಿದೆ ಎಂದೂ ಅಲ್ಲ. ಅದು ದೈವಿಕ ಪ್ರಕಟಣೆ (REVELATION). ಅದನ್ನು ಬರೆದಿರುವಂತೆಯೇ ಓದಿ: "ರಕ್ತಮಾಂಸಗಳು ಇದನ್ನು ನಿನಗೆ ಪ್ರಕಟಿಸಲಿಲ್ಲ (ದರ್ಶಿಸಲ್ಲಿಲ್ಲ), ಆದರೆ ನನ್ನ ತಂದೆಯು ಪ್ರಕಟಿಸಿದ್ದಾನೆ, ಮತ್ತು ಈ ಬಂಡೆಯ (ಪ್ರಕಟಣೆಯ) ಮೇಲೆ ನಾನು ನನ್ನ ಸಭೆಯನ್ನು ಕಟ್ಟುವೆನು:" ಸಭೆಯು ಪ್ರಕಟಣೆಯ ಮೇಲೆ, "ಕರ್ತನು ಹೀಗೆ ಹೇಳುತ್ತಾನೆ" ಎಂಬುದರ ಮೇಲೆ ಕಟ್ಟಲ್ಪಟ್ಟಿದೆ.
ದೇವರಿಗೆ ಯೋಗ್ಯವಾದ ಯಜ್ಞವನ್ನು ಅರ್ಪಿಸಲು ಏನು ಮಾಡಬೇಕೆಂದು ಹೇಬೆಲನಿಗೆ ಹೇಗೆ ತಿಳಿಯಿತು? ನಂಬಿಕೆಯ ಮೂಲಕ ಅವನು ರಕ್ತದ ದೈವಿಕ ಪ್ರಕಟಣೆಯನ್ನು ಪಡೆದನು. ಕಾಯಿನನಿಗೆ ಅಂತಹ ಪ್ರಕಟಣೆ ಸಿಗಲಿಲ್ಲ (ಅವನಿಗೆ ಆಜ್ಞೆಯಿದ್ದರೂ ಸಹ) ಆದ್ದರಿಂದ ಅವನು ಸರಿಯಾದ ಯಜ್ಞವನ್ನು ಅರ್ಪಿಸಲು ಸಾಧ್ಯವಾಗಲಿಲ್ಲ. ದೇವರ ಕಡೆಯಿಂದ ಬಂದ ಪ್ರಕಟಣೆಯೇ ವ್ಯತ್ಯಾಸವನ್ನು ಉಂಟುಮಾಡಿತು ಮತ್ತು ಹೇಬೆಲನಿಗೆ ನಿತ್ಯಜೀವವನ್ನು ನೀಡಿತು. ಈಗ ನೀವು ಪಾದ್ರಿಗಳು ಹೇಳುವುದನ್ನು ಅಥವಾ ಸೆಮಿನಾರಿಯಲ್ಲಿ ಕಲಿಸುವುದನ್ನು ಸ್ವೀಕರಿಸಬಹುದು, ಮತ್ತು ಅದನ್ನು ನಿಮಗೆ ಎಷ್ಟೇ ನಿರರ್ಗಳವಾಗಿ ಕಲಿಸಿದರೂ, ಯೇಸುವೇ ಕ್ರಿಸ್ತನೆಂದೂ, ಆ ರಕ್ತವೇ ನಿಮ್ಮನ್ನು ಶುದ್ಧೀಕರಿಸುತ್ತದೆ ಎಂದೂ ಮತ್ತು ದೇವರೇ ನಿಮ್ಮ ರಕ್ಷಕನೆಂದೂ ದೇವರು ನಿಮಗೆ ಪ್ರಕಟಿಸುವವರೆಗೆ, ನಿಮಗೆ ಎಂದಿಗೂ ನಿತ್ಯಜೀವ ಇರುವುದಿಲ್ಲ. ಆತ್ಮಿಕ ಪ್ರಕಟಣೆಯೇ ಅದನ್ನು ಮಾಡುತ್ತದೆ.
ಅನುವಾದದ ಮೂಲ
CAB-01 - ಯೇಸು ಕ್ರಿಸ್ತನ ಪ್ರಕಟಣೆ (The Revelation of Jesus Christ)